Kannada Kali / ಕನ್ನಡ ಕಲಿ

ಕನ್ನಡ ಕಲಿ

“ಕನ್ನಡ ಕಲಿ” ೨೦೧೮ರ ವಸಂತಮಾಸದಲ್ಲಿ ಎರಡನೇ ವರ್ಷಕ್ಕೆ ಕಾಲಿಟ್ಟಿತು. “ಆಟದೊಡನೆ ಪಾಠ” ಎನ್ನುವ ಧ್ಯೇಯವನ್ನಿಟ್ಟುಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ನಗುನಗುತ್ತಾ ತಂದೆತಾಯಿಯರ ಒತ್ತಾಯವಿಲ್ಲದೆ ಪ್ರತಿವಾರ ತರಗತಿಗೆ ಬರುತ್ತಿರುವುದು ನಮಗೆ ಸಂತೋಷದ ಮತ್ತು ಹೆಮ್ಮೆಯ ಸಂಗತಿ! ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಈ ಕಾರ್ಯಕ್ರಮವು ನೂರಾರು ಮಕ್ಕಳಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಿದೆ. ಅನೇಕ ಕನ್ನಡ ಕೂಟದ ಕಾರ್ಯಕ್ರಮಗಳಲ್ಲಿ ಕನ್ನಡ ಕಲಿಯ ಮಕ್ಕಳು ವೇದಿಕೆಯ ಮೇಲೆ ಒಟ್ಟಿಗೆ ನಿಂತು, ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಕ್ಕಳಿಗೆ ಅಕ್ಷರಾಭ್ಯಾಸ, ಕಾಗುಣಿತ ಇತ್ಯಾದಿಗಳನ್ನು ಹೊಸ ರೀತಿಯಲ್ಲಿ ಕಲಿಸಲು ನಾವು ಸದಾ ಶ್ರಮಿಸುತ್ತೇವೆ. ಹೊಸದಾದ ಮತ್ತು ಆಕರ್ಷಕವಾದ, ಹಾಡು-ಹಸೆಗಳನ್ನು ಸಿದ್ಧಪಡಿಸಿದ್ದೇವೆ ಮತ್ತು ಹುಡುಕಿ ತರುತ್ತೇವೆ. ಕನ್ನಡ ಕಲಿಯ ಪುಸ್ತಕ ಸಮಿತಿಯು ಕಳೆದ ವರ್ಷಗಳಲ್ಲಿ ಕನ್ನಡ ಕಲಿಯ ಮೊದಲ ಎರಡು ತರಗತಿಗಳಿಗೆ, ತನ್ನದೇ ಆದ ಪಠ್ಯಕ್ರಮವನ್ನು ಹೊರದೇಶದಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಹೊಂದುವ ರೀತಿಯಲ್ಲಿ ರಚಿಸಿ, ಪಠ್ಯಪುಸ್ತಕ ಬಿಡುಗಡೆ ಮಾಡಿರುವುದು ಹೆಮ್ಮೆಯ ಸಂಗತಿ. ಈ ಸಮಿತಿಯು ಮುಂದಿನ ಎಲ್ಲ ತರಗತಿಗಳಿಗೂ ತನ್ನದೇ ಆದ ಪಠ್ಯಕ್ರಮವನ್ನು ರಚಿಸುವ ಯೋಜನೆಯನ್ನು ಹಾಕಿಕೊಂಡು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ವಿಷಯ.

“ಕನ್ನಡ ಕಲಿ”ಯ ಯಶಸ್ಸಿಗೆ ಮುಖ್ಯವಾಗಿ ಮಕ್ಕಳ ಉತ್ಸಾಹ, ತಂದೆತಾಯಿಯರ ಪ್ರೋತ್ಸಾಹ ಮತ್ತು ಸ್ವಯಂಸೇವಕ ಶಿಕ್ಷಕರ ಶ್ರದ್ಧೆ, ಆಸಕ್ತಿ, ಮತ್ತು ಅವಿರತ ದುಡಿಮೆಯೇ ಕಾರಣ. ಇವರಿಗೆ ಸಹಾಯಕರಾಗಿ ಕೆಲಸ ಮಾಡುವ ಸ್ವಯಂಸೇವಕ ವಿದ್ಯಾರ್ಥಿಗಳ ಉತ್ಸಾಹಿ ತಂಡದ ಸೇವೆ ಬಹಳ ಪ್ರಶಂಶನೀಯ. ಇವರೆಲ್ಲರ ಅಪಾರ ಕನ್ನಡ ಪ್ರೀತಿ ನಿಜವಾಗಿಯೂ ಮೆಚ್ಚುವಂತಹದ್ದು. ಪ್ರತಿ ಶನಿವಾರ ತಮ್ಮ ಅಮೂಲ್ಯವಾದ ಸಮಯವನ್ನು ”ಕನ್ನಡ ಕಲಿ”ಗೆ ಮೀಸಲಾಗಿಟ್ಟು, ಪ್ರತಿಯಾಗಿ ಏನನ್ನೂ ಬಯಸದೆ, ಮಕ್ಕಳಿಗೆ ಕನ್ನಡ ಕಲಿಸುವುದರ ಮೂಲಕ ವಿದ್ಯಾದಾನ ಮಾಡುತ್ತಿದ್ದಾರೆ. ಇವರ ಕನ್ನಡ ಪ್ರೀತಿ ಹೀಗೇ ಮುಂದುವರೆಯಲಿ!

ಕನ್ನಡ ಕಲಿ 2019-20 ರ ದಾಖಲಾತಿ ಪ್ರಾರಂಭವಾಗಿದೆಯೆಂದು ತಿಳಿಸಲು ಕನ್ನಡ ಕಲಿ ತಂಡ ಹೆಮ್ಮೆಪಡುತ್ತದೆ

ಪ್ರತಿ ವರ್ಷದಂತೆ ಈ ವರುಷವೂ ಸೆಪ್ಟೆಂಬರ್ ತಿಂಗಳಿನಲ್ಲಿ ಶಾಲೆ ಪ್ರಾರಂಭವಾಗಲಿದ್ದು, ಮುಂದಿನ  ತಿಂಗಳವರೆಗೂ ನಡೆಯಲಿದೆ .

ಹೆಚ್ಚಿನ ಪ್ರಶ್ನೆ/ವಿವರಗಳಿಗೆ ಈ ಕೆಳಕಂಡವರನ್ನು ಸಂಪರ್ಕಿಸಿ. hakka.anche@gmail.com

ವಂದನೆಗಳು

ಕನ್ನಡ ಕಲಿ

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಕಿ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರೋಮಾಂಚನಗೊಳುವಾ ತನುಮನ
ಕನ್ನಡವೇ ಸತ್ಯ! ಕನ್ನಡವೇ ನಿತ್ಯ!
- ಕುವೆಂಪು

ಕನ್ನಡ ಕಲಿ - Learn Kannada Books


ಕನ್ನಡ ಕಲಿ ಪಠ್ಯಕ್ರಮದ ಸ್ಥೂಲ ರೂಪ ಮತ್ತು ಹಂತಗಳು