About Us

ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ, ಜಯ ಹೇ ರಸಋಷಿಗಳ ಬೀಡೆ! ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ! ನಮಸ್ಕಾರ, ಕನ್ನಡ ಕೂಟದ ಸದಸ್ಯರಿಗೆಲ್ಲಾ ನಮಸ್ಕಾರಗಳು, ಎಲ್ಲರಿಗೂ ಕನ್ನಡ ಕಸ್ತೂರಿ ಹಕ್ಕ ಮುಖ ಪುಟಕ್ಕೆ ಸ್ವಾಗತ. ಹಕ್ಕ ಲಾಭ ರಹಿತ ಒಂದು ಸಂಸ್ಥೆ. ನಾವುಗಳು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅಮೆರಿಕನ್ನಡ ಜನರಿಗೆ ತಿಳಿಸಿ ಮತ್ತು ಅದರ ಬೆಳವಣಿಗೆಗೆ ಪ್ರೋತ್ಸಾಹ ನೀಡಿತಿದ್ದೇವೆ.ನಮ್ಮ ಹಕ್ಕ ಕನ್ನಡ ಕೂಟದ ಚಟುವಟಿಕೆಗಳು ಮತ್ತು ಪೆನ್ಸಿಲ್ವೇನಿಯಾ ಕನ್ನಡಿಗರ ಹಾಗೂ ಕನ್ನಡಿಗರಿಗಾಗಿ ಪ್ರಚುರ ಪಡಿಸುವ ಸುದ್ಧಿ ವಾಹಿನಿಯನ್ನು ನಿಮ್ಮ ಮುಂದೆ ತರುವ ಒಂದು ಪ್ರಯತ್ನ. ಈ ಸಂಚಿಕೆಯು ನಮ್ಮೆಲ್ಲರ ಮತ್ತು ಕನ್ನಡ ಕೂಟದ ಮುಖ್ಯವಾಹಿನಿಯಾಗಿ ಮುಂದುವರೆಯಲು ನಿಮ್ಮೆಲ್ಲರ ಸಹಕಾರ ಹಾಗೂ ಸಹಯೋಗ ಅತ್ಯಮೂಲ್ಯವಾದದ್ದು. ನಮ್ಮ ಕನ್ನಡ ಕೂಟದ ಅಭಿವೃದ್ದಿಗಾಗಿ ನಿಮ್ಮಯ ಅಭಿಪ್ರಾಯಗಳಿಗೆ ಸದಾ ಸ್ವಾಗತ. ನಿಮಗೂ ಕೂಡ ಕನ್ನಡದಲ್ಲಿ ಏನಾದರು ಬರೆಯುವ ಹಂಬಲವಿದ್ದಲ್ಲಿ ಅಥವಾ ನಿಮ್ಮ ಬಳಿ ಪ್ರಕಟಿಸಲು ಕನ್ನಡದ ವಿಷಯವಿದ್ದಲ್ಲಿ ನಮಗೆ ತಿಳಿಸಿ. ಆದರೆ ಇ-ಸಂಚಿಕೆಯಲ್ಲಿ ಪ್ರಕಟಿಸುವ ನಿರ್ಧಾರ ಸಂಪಾದಕರದಾಗಿರುತ್ತದೆ. Welcome to the webpage of Harrisburg Kannada Kasturi – HaKKa (ಹಕ್ಕ). We are a non-profit organization primarily dedicated to promoting culture, language and heritage of Karnataka. We conduct various programs throughout the year promoting the arts and music of India, especially Karnataka. Please find more information in the other sections. You can always contact us via email hakka.anche@gmail.com Thank you,